ಆಟಿದ ಕುಳಿತುಕೊಳ್ಳುವುದು ಸೌರಮಾನೊದ ನಾಲ್ಕನೆ ತಿಂಗಳು ಆಟಿಯಲ್ಲಿ ಈ ಕ್ರಮ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ ಕಳೆದು ದಕ್ಷಿಣಾಯನದ ಈ ಆಟಿ ತಿಂಗಳಲ್ಲಿ ಜೋರು ಮಳೆ ಬರುತ್ತದೆ . ಈ ಮಳೆಗೆ ಭೂಮಿ ಎಲ್ಲಾ ನೆನೆದು ತಂಪಾಗಿರುತ್ತದೆ.ಆ ಸಮಯದಲ್ಲಿ ನಂಬಿಕೆಗೆ ಅನುಸಾರವಾಗಿ ಕೆಲವು ಆಚರಣೆಗಳು ನಡೆಯುತ್ತದೆ . ಮದುವೆ ಆಗಿ ಗಂಡನ ಮನೆಗೆ ಬಂದ ಹೆಣ್ಣು ಸುರುವಿನ ಆಟಿ ತಿಂಗಳನ್ನು ತವರು ಮನೆಯಲ್ಲಿ ಕಳೆಯುವುದು ಹಿಂದಿನ ಕಾಲದ ಸಂಪ್ರದಾಯ ಇದನ್ನು ಆಟಿ ಕುಳಿತುಕೊಳ್ಳುವುದು ಎಂದು ಹೇಳುತ್ತಾರೆ == ಹಿನ್ನೆಲೆ == ಆಟಿ ತಿಂಗಳಿನಲ್ಲಿ ಹೊಸ ಮದುಮಗ ಮತ್ತು ಮದುಮಗಳು ದೈಹಿಕ ಸಂಪರ್ಕ ಮಾಡಬಾರದೆಂಬ ನಂಬಿಕೆ. ಹಾಗಾಗಿ ಅವರನ್ನು ಬೇರ್ಪಡಿಸುವುವ ಸಲುವಾಗಿ ಈ ಸಂಪ್ರದಾಯವನ್ನು ಮಾಡಲಾಗಿದೆ === ಆಟಿಯಲ್ಲಿ ಕರೆದುಕೊಂಡು ಹೋಗುವ ಕ್ರಮ === ಹೊಸ ಮದುಮಗಳನ್ನು ಸುರುವಿನ ಆಟಿಗೆ ತವರು ಮನೆಯವರು ಹೋಗಿ ಕರೆದು ಕೊಂಡು ಬರುವ ಕ್ರಮ. ಆಮೇಲೆ ಸ್ವಲ್ಪ ದಿವಸದ ನಂತರ ಗಂಡನ ಮನೆಯವರು ಬಂದು ಕರೆದುಕೊಂಡು ಹೋಗುತ್ತಾರೆ. == ಆಟಿ ಸಮ್ಮನ == ಆಟಿ ಕುಳಿತುಕೊಳ್ಳಲು ಬಂದ ಮಗಳನ್ನು ಗಂಡನ ಮನೆಗೆ ಕರೆದುಕೊಂಡು ಹೋಗುಲು ಬಂದ ನೆಂಟರಿಗೆ ಜೋರಾಗಿ ಔತಣ ನಡೆಯುತ್ತದೆ. ತುಳುವಿನ ಕಬಿತೆಗಳಲ್ಲಿ ಹೀಗೊಂದು ಮಾತಿದೆ , ಬರಾಂದಿ ಬಿನ್ನೆರ್ ಬತ್ತೆರ್ ಮಗ ಸೇಸೊ ಕೊರಾಂದಿ ಸಮ್ಮನೊ ಕೊರೊಡಾಂಡೆ. === ಆಟಿಯ ನಂಬಿಕೆಗಳು === ಆಟಿಯಲ್ಲಿ ಹೆಣ್ಣು ಮಗಳು ಮೈನೆರೆದರೆ ಅನಿಷ್ಠ ಎಂಬ ನಂಬೊಲಿಕೆ ಇದೆ. ಆಟಿಯಲ್ಲಿ ಮೈನರೆದ ಹುಡುಗಿಗೆ, ಅನಾರೋಗ್ಯ್ದ ಮಕ್ಕಳಿಗೆ, ಗೊಡ್ಡು ಹಸುವಿಗೆ, ಫಲಕೊಡದಿರುವ ತೆಂಗಿನ ಮರಕ್ಕೆ ಮತ್ತು ಸಂತತಿ ಆಗದಿರುವ ಹೆಂಗಸಿಗೆ ಆಟಿ ಕಳೆಂಜನಲ್ಲಿ ತಲೆಗೆ ನೀರು ಹಾಕಿಸಿ ಕಳೆಂಜನಿಗೆ ದಾನ ಕೊಟ್ಟರೆ ಆ ಅನಿಷ್ಠ ಕಳೆಯುತ್ತದೆ ಮಕ್ಕಳಾಗುತ್ತದೆ ಸಮೃದ್ದಿಯಾಗುತ್ತದೆ ಎಂಬ ನಂಬಿಕೆಗಳ ವಿಷಯ ತುಳುನಾಡಿನ ಆಟಿಕಳೆಂಜ ಪಾಡ್ದಾನದಲ್ಲಿ ಉಲ್ಲೇಖಿತವಾಗಿದೆ . === ಆಟಿಯ ತುಳು ಗಾದೆಲು === ಆಟಿ ಅಡೋಣ್ತ್ ಪೋಪುಂಡು, ಸೋಣೊ ಸೋಡೋಣ್ತ್ ಪೋಪುಂಡು.[ಆಟಿತಿಂಗಳು ನಿಧಾನವಾಗಿ/ಅಲುಗಿಕೊಂಡು ಹೋಗುತ್ತದೆ. ಸೋಣ ತಿಂಗಳು ಬೇಗನೆ/ತೋಡಿಕೊಂಡು ಹೋಗುತ್ತದೆ] ಆಟಿಗೊರ ಸೋಣೊಗೊರ [ಆಷಾಢಕ್ಕೊಮ್ಮೆ ಶ್ರಾವಣಕ್ಕೊಮ್ಮೆ] ಆಟಿಡ್ ಅಗೆಲ್ ಸೋಣೊಡ್ ಕೋಲ[ಆಟಿ ತಿಂಗಳಿನ ಅಗೆಲ್ ಎಂಬ ಆಚರಣೆ ಸೋಣ ತಿಂಗಳಿನಲ್ಲಾಗುವ ಕೋಲ ಎಂಬ ಆರಾಧನೆ] ಆಟಿತಿಂಗೊಲುಡು ಒರ್ಲ ದಡ್ಡ್ ಇತ್ತಿನಾಯೆ ಪಿದಾಯಿ ಪೋವಾಯೆ [ಆಟಿ ತಿಂಗಳಿನಲ್ಲಿ (ಜೋರಾದ ಮಳೆಯ ಕಾರಣ) ಒಂದ ಬಳ್ಳ ದಡ್ಡು ಭತ್ತ ಇದ್ದವನು ಮನೆ ಬಿಟ್ಟು ಹೊರ ಹೋಗಲಾರನು] ಆಟಿದ ದೊಂಬು ಆನೆದ ಬೆರಿ ಪುಡಾವು. [ಆಟಿಯ ಬಿಸಿಲಿಗೆ ಆನೆಯ ಬೆನ್ನೂ ಒಡೆದೀತು] ಮಾಯಿಡ್ದ್ ಬುಕ್ಕೊ ಮರಿಯಾಲ, ಆಟಿಡ್ದ್ ಬುಕ್ಕೊ ಅರೆಗಾಲ [ಕುಂಭ(ಸೌರಮಾನದ ಹನ್ನೊಂದನೆಯ ತಿಂಗಳು) ಮಾಸದ ಅನಂತರ ಮಳೆಗಾಲ.ಕರ್ಕಟಕ ಮಾಸದ ಅನಂತರ ಬೇಸಗೆ ಕಾಲ] ಮಾಯಿಡ್ ಬರ್ಸ ಬತ್ತ್ಂಡ ಮಲೆ ಬುಲೆವು [ಕುಂಭ ಮಾಸದಲ್ಲಿ ಮಳೆ ಬಂದರೆ ಕಾಡು ಬೆಳೆದೀತು] ಆಟಿದ ಪೆಲಕಾಯಿ ನಂಜಿ ಮಗ ಅಮ್ಮೆ ಬತ್ತೆನೊ ತೂಲ ಮಗ[ ಆಷಾಡ ಮಾಸದ ಹಲಸಿನ ಹಣ್ಣು ತಿನ್ನುವುದಕ್ಕೆ ಯೋಗ್ಯವಲ್ಲ ತಿನ್ನುವಾಗ ಏನಾದರೂ ತಂದೆ ಬಂದು ಬಿಟ್ಟರೆ ಬೈಯುತ್ತಾರೆ ಅದಕ್ಕೆ ತಾಯಿ ಹಲಸಿನ ಹಣ್ಣು ಕೊಯ್ಯುವಾಗ ನೋಡಿಕೊಳ್ಳಲು ಮಕ್ಕಳಿಗೆ ಹೇಳುತ್ತಾಳೆ] == ಉಲ್ಲೇಖಗಳು ==